Skip to main content

Posts

Showing posts from 2015

Kannada songs lyrics

ದೀಪವು ನಿನ್ನದೆ ಗಾಳಿಯೂ ನಿನ್ನದೆ ರಚನೆ : ಕೆ ಎಸ್ ನರಸಿಂಹಸ್ವಾಮಿ ದೀಪವು ನಿನ್ನದೇ ಗಾಳಿಯು ನಿನ್ನದೇ ಆರದಿರಲಿ ಬೆಳಕು ಕಡಲು ನಿನ್ನದೇ ಹಡಗು ನಿನ್ನದೇ ಮುಳುಗದಿರಲೀ ಬಧುಕು ದೀಪವು ನಿನ್ನದೇ ಗಾಳಿಯು ನಿನ್ನದೇ ಆರದಿರಲಿ ಬೆಳಕು ಬೆಟ್ಟವು ನಿನ್ನದೇ ಬಯಲು ನಿನ್ನದೇ ಹಬ್ಬಿ ನಗಲಿ ಪ್ರೀತಿ ನೆರಳೊ ಬಿಸಿಲೋ ಎಲ್ಲವೂ ನಿನ್ನದೇ ನೆರಳೊ ಬಿಸಿಲೋ ಎಲ್ಲವೂ ನಿನ್ನದೇ ಇರಲಿ ಏಕ ರೀತಿ ದೀಪವು ನಿನ್ನದೇ ಗಾಳಿಯು ನಿನ್ನದೇ ಆರದಿರಲಿ ಬೆಳಕು